ನಿನ್ನ ನೆನಪೇಕೆನಗೆ ಈ ತೆರದಿ ಕಾಡುತಿದೆ?
ಮನದ ಬಯಲಲಿ ನಿನ್ನ ಹೂನಗೆಯೆ ಮೂಡುತಿದೆ ||೧||
ಹೃದಯದೊಳ ಕೋಗಿಲೆಯು ಮೈಮರೆತು ಹಾಡುತಿದೆ |
ನಿನ್ನದೇ ದನಿಯ ತಾನನುರಣನ ಮಾಡುತಿದೆ ||೨||
ಭಾವ ಭಿತ್ತಿಯ ನಿನ್ನ ಬಿಂಬ ಮುದ ನೀಡುತಿದೆ |
ಕನಸಲೂ ಮನ ನಿನ್ನ ದಾರಿಯನೆ ನೋಡುತಿದೆ ||೩||
ನಿನ್ನೊಲುಮೆ ತಂಗಾಳಿ ಮೈದಡವಿ ತೀಡುತಿದೆ |
ಮಧುರ ಕ್ಷಣಗಳ ಪುಳಕವನ್ನೀಗ ಬೇಡುತಿದೆ ||೪||
ನಿನ್ನ ನೆನಪು... ನಿನ್ನದೇ ನೆನಪು...||
ಧ್ವನಿ:
https://drive.google.com/file/d/11IL9-wrt-WemaNvBYgFX8qWMVAFN7YhA/view?usp=sharing
No comments:
Post a Comment